HRMS -2.0 SOFTWARE: ಹೆಚ್.ಆರ್.ಎಂ.ಎಸ್ -2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು ಇಲಾಖೆಗೆ/ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಅದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ.

HRMS -2.0 SOFTWARE: ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು ಇಲಾಖೆಗೆ/ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಅದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ.

HRMS -2.0 SOFTWARE: ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆರ್.ಎಂ.ಎಸ್. – 2.0 ಯೋಜನೆಯ ಅಭಿವೃದ್ಧಿ ಹಂತದಲ್ಲಿದ್ದು ಈಗಾಗಲೇ ವೇತನ ಮಾಡ್ಯುಲ್ (Pay Roll Module) ನ್ನು 21 ಇಲಾಖೆಗಳಿಗೆ ಪ್ರಯೋಗಕವಾಗಿ ಜಾರಿಗೆ ತರಲಾಗಿದೆ. ಹೆಚ್.ಆರ್.ಎಂ.ಎಸ್. -2.0 ವೇತನ ಮಾಡ್ಯುಲ್ (Pay Roll Module) ಮೂಲಕವೇ ಪ್ರಯೋಗಕವಾಗಿ ಆಯ್ಕೆಮಾಡಲಾದ ಈ 21 ಇಲಾಖೆಗಳ ಸರ್ಕಾರಿ ನೌಕರರಿಗೆ ವೇತನವನ್ನು ವಿಸ್ತರಿಸಲಾಗುತ್ತಿದೆ. ಮುಂದುವರೆದು, ಹೆಚ್ .ಆರ್.ಎಂ.ಎಸ್. -2.0 ನ ಯೋಜನೆಯ ತಂತ್ರಂಶದಲ್ಲಿ 36 ಮಾಡ್ಯುಲ್‌ಗಳು ಅಭಿವೃದ್ಧಿಯ ಹಂತದಲ್ಲಿದ್ದು ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಈ 36 ಮಾಡ್ಯುಲ್‌ಗಳು ಒಂದಕ್ಕೊಂದು ಸಮಕ್ಷಮ ಹೊಂದಾಣಿಕೆಯಿಂದ ನಡೆಸಲೇಬೇಕಾಗಿರುವುದರಿಂದ ಈ ಕೆಳಗಿನಂತೆ ಕೋರಿರುವ ಮಾಹಿತಿಯನ್ನು ಒದಗಿಸುವುದು.

1. ನೌಕರರ KGID ಆಧಾರ್ ಜೋಡಣೆ (KGID-Adhar Seeding):

ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆ (KASS) (ಸರ್ಕಾರಿ ನೌಕರರ ಕುಟುಂಬ ಅವಲಂಬಿತ ಸದಸ್ಯರನ್ನು ಒಳಗೊಂಡಂತೆ), ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAMS) ನ ತಂತ್ರಾಂಶಗಳು ಅಭಿವೃದ್ಧಿಯ ಹಂತದಲ್ಲಿದ್ದು, ಸರ್ಕಾರಿ ನೌಕರರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ವಿವಿಧ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ ಉಪಯೋಗಿಸಿಕೊಳ್ಳಲು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಆಧಾರ್ ಜೋಡಣೆ (KGID-Adhar Seeding) ಪ್ರಕ್ರಿಯೆ [ಉಲ್ಲೇಖ: https://hrms.karnataka.gov.in/ ನ ವೆಬ್ಸೈಟ್ ನಲ್ಲಿ DDO ರವರುಗಳು ತಮ್ಮ LOGIN ನಲ್ಲಿ SERVICE REGISTER >> FAMILY DEPENDENT ENTRY FORM-KASS 2 OPTION ಕ್ಲಿಕ್ ಮಾಡಿ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಆಧಾರ್ ಜೋಡಣೆ (KGID-Adhar Seeding) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು) ಬಹಳ ಅವಶ್ಯಕವಾಗುರುವುದರಿಂದ ಆದ್ಯತೆ ಮೇರೆಗೆ ಪೂರ್ಣಗೊಳಿಸುವುದು. ಈ ಬಗ್ಗೆ ಈವರೆವಿಗೂ ಇಲಾಖಾವಾರು “ಕೆ.ಜಿ.ಐ.ಡಿ – ಆಧಾರ್ ಜೋಡನೆಯ” ದತ್ತಂಶದ ಪ್ರಗತಿಯ ವರದಿಯನ್ನು ಲಗತ್ತಿಸಲಾಗಿದೆ.

2.HRMS-2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸಬೇಕಾದ ಮಾಹಿತಿ.

ಉಲ್ಲೇಖ::https://hrms2org.karnataka.gov.in/HRMS2DASHBOARD/login]

a) ವೃಂದ ಮತ್ತು ನೇಮಕಾತಿ:

ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ /ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆದಿರುವ ನವೀಕೃತ ಮಾಹಿತಿಯನ್ನು ನವೀಕರಿಸುವುದು.

b) ಇಲಾಖೆಯ ಕಛೇರಿಗಳ ಮಾಹಿತಿ

ಇಲಾಖೆಯ ರಾಜದ್ಯಾಂತ/ ದೇಶದ್ಯಾಂತ ಇರುವ ಕಛೇರಿಗಳಲ್ಲಿ ರಾಜ್ಯ ಮಟ್ಟದ, ತಾಲ್ಲೂಕು, ವಲಯ, ವೃತ್ತ, ವಿಭಾಗ ಹಾಗೂ ಇತರೆ ಹಂತಗಳಿರುವ ಇಲಾಖಾ-ಕಛೇರಿಗಳ ನಿಖರವಾದ ವಿಳಾಸವನ್ನು ಕ್ರಮಾನುಗತವಾಗಿ ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸುವುದು.

3. ಭತ್ಯೆಗಳು:

HRMS-2.0 ತಂತ್ರಾಂಶದಲ್ಲಿ ವಿವಿಧ ಭತ್ಯೆಗಳನ್ನು ಸರ್ಕಾರಿ ನೌಕರರಿಗೆ ಸ್ವಯಂಚಾಲಿತವಾಗಿ ನೀಡುವ ಸಲುವಾಗಿ ಪ್ರತ್ಯೇಕ ಮಾಡ್ಯುಲ್ ರಚಿಸಲಾಗಿದ್ದು, ಇಲಾಖೆಯ ಹಂತದಲ್ಲಿ ವಿವಿಧ ವೃಂದ / ಪದನಾಮ/ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಆರ್ಥಿಕ ಇಲಾಖೆಯು ಹೊರಡಿಸಿರುವ ಆದೇಶಗಳನ್ವಯ [ಉಲ್ಲೇಖ: ರಾಜ್ಯ ವೇತನ ಆಯೋಗದ ಅನುಷ್ಠಾನದ ಇತ್ತೀಚಿನ ಆದೇಶಗಳು; https://finance.karnataka.gov.in/] ನೀಡಲಾಗುತ್ತೀರುವ ನೀಡಬಹುದಾದ ವಿವಿಧ ಭತ್ಯೆಗಳನ್ನು ಈ ಆದೇಶಗಳಲ್ಲಿರುವ ಎಲ್ಲಾ ಷರತ್ತುಗಳ ಮತ್ತು ನಿಬಂಧನೆಗಳ ಅನುಗುಣವಾಗಿ ಪರಿಷ್ಕರಿಸದಿದ್ದಲ್ಲಿ ಪ್ರಸ್ತುತ ನೀಡುತ್ತೀರುವ ವಿವಿಧ ಭತ್ಯೆಗಳು ಕಡಿತಗೊಳ್ಳಬಹುದು. ಅದ್ದರಿಂದ, ನಿಖರವಾದ ಭತ್ಯೆಗಳ ಮಾಹಿತಿಯನ್ನು ಆಯಾ ಭತೆಯಗಳಿಗೆ ಸಂಬಂಧಿತ ದರಗಳನ್ನು ಮಾತ್ರ HRMS -1 ರಲ್ಲಿ ನವೀಕರಿಸುವುದು/ ನಮೂದಿಸುವುದು.

4. ಸರ್ಕಾರಿ ನೌಕರರ ಇನ್ನಿತರ ಪ್ರಮುಖ ವಿವರಗಳು:

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ, ವರ್ಗಾವಣೆಗೊಂಡ (Transfer-In & Transfer-Out) / ವರ್ಗಾವಣೆಯಾಗಬಹುದಾದ/ ನಿಯೋಜಸಿಲಾದ/ ಬಡ್ತಿ ನೀಡಲಾದ /ಬಡ್ತಿ ನೀಡಲಾಗುವ/ ನಿವೃತ್ತಿಹೊಂದಿರುವ/ ಸ್ವಯಂ-ನಿವೃತ್ತಿ ಹೊಂದಿರುವ/ನಿವೃತ್ತಿಹೊಂದುತ್ತಿರುವ / ಅಮನತ್ತುಗೊಳಿಸಲಾದ/ ವಜಾಗೋಳಿಸಲಾದ ನೌಕರರ ಜಿ.ಪಿ.ಎಫ್ / ಕೆ.ಜಿ.ಐ.ಡಿ ನ ಮಾಸಿಕ ಪ್ರಿಮೀಯಮ್, ಜಿ.ಪಿ.ಎಫ್ ನ ಮುಂಗಡ ಪಾವತಿಸುವ ಕಂತುಗಳು/ ಕೆ.ಜಿ.ಐ.ಡಿ ನ ಸಾಲದ ಕಂತುಗಳನ್ನು ಹಾಗೂ ಜಿ.ಪಿ.ಎಫ್ ನ ಮುಂಗಡ / ಕೆ.ಜಿ.ಐ.ಡಿ ಸಾಲದ ಪ್ರಾರಂಭ/ ಮುಕ್ತಾಯದ ದಿನಾಂಕಗಳನ್ನು ಕಡ್ಡಾಯವಾಗಿ HRMS -1 ರಲ್ಲಿ ಸರಿಯಾಗಿ ನಮೂದಿಸಿರಬೇಕು, ಇಲ್ಲದಿದ್ದಲ್ಲಿ ಹೆಚ್ .ಆ‌ರ್.ಎಂ.ಎಸ್ 2.0 ತಂತ್ರಾಂಶದಲ್ಲಿ ವೇತನ ಮಾಡ್ಯುಲ್ (Pay Roll Module) ನಿಂದ ನಿಮ್ಮ ಇಲಾಖೆಯ ಡಿ.ಡಿ.ಓ ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ವೇತನ ಸೆಳೆಯಲು ಸಾಧ್ಯವಾಗುವುದಿಲ್ಲ.

5.KGID

a. ಪ್ರಸ್ತುತ ಚಾಲ್ತಿಯಲ್ಲಿರುವ ಸಾಲವನ್ನು ಯಾವುದಾದರು ಕೆ.ಜಿ.ಐ.ಡಿ ವಿಮಾ ಪಾಲಿಸಿಯ ಮೇಲೆ ಪಡೆದಿದ್ದರೆ, ಒಂದಕ್ಕಿಂತ ಹೆಚ್ಚಿನ ಬಾರಿ ಅದೇ ಕೆ.ಜಿ.ಐ.ಡಿ ವಿಮಾ ಪಾಲಿಸಿಯ ಸಾಲವನ್ನು ಪಡೆದಿರಬಾರದು (ಹೆಚ್. ಆರ್. ಎಂ. ಎಸ್-1 ರಲ್ಲಿರುವ ಒಂದು ಪಾಲಿಸಿ ಸಂಖ್ಯೆಗೆ ಸಂಬಂಧಿಸಿದಂತೆ ಕೆ.ಜಿ.ಐ.ಡಿ ಸಾಲದಲ್ಲಿ ಯಾವುದೇ ನಕಲುಗಳು ಇರಬಾರದು).

b. ಕೆ.ಜಿ.ಐ.ಡಿ ವಿಮಾ ಪಾಲಿಸಿ/ ಪಾಲಿಸಿಗಳ ಮೇಲೆ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಬೇಕು ಹಾಗೂ ಸಾಲ ಪಡೆದಿರುವ ಕೆ.ಜಿ.ಐ.ಡಿ ವಿಮಾ ಪಾಲಿಸಿ/ ಪಾಲಿಸಿಗಳ ಸಂಖ್ಯೆಯು ಹಾಗೂ ಸರ್ಕಾರಿ ನೌಕರರು ಪಡೆದಿರುವ ಕೆ.ಜಿ.ಐ.ಡಿ ವಿಮಾ ಪಾಲಿಸಿ /ಪಾಲಿಸಿಗಳ ಸಂಖ್ಯೆ/ಸಂಖ್ಯೆಗಳು ನಿಖರವಾಗಿ ಹೊಂದಾಣಿಕೆಯಾಗಬೇಕು.

C. ಕೆ.ಜಿ.ಐ.ಡಿ ವಿಮಾ ಪಾಲಿಸಿದಾರರ ಮಾಸಿಕ ಪ್ರೀಮಿಯಂ ಮೊತ್ತವನ್ನು ಪಾಲಿಸಿದಾರರ ವಯಸ್ಸು 55 ವರ್ಷದವರೆಗೆ ಮಾತ್ರ ಪಾವತಿಸುವುದು ತದನಂತರ ಮಾಸಿಕ ಪ್ರೀಮಿಯಂ ಮೊತ್ತವನ್ನು ನಿಲ್ಲಿಸಿರುವ ಬಗ್ಗೆ ಹೆಚ್. ಆರ್. ಎಂ. ಎಸ್ -1.0 ರಲ್ಲಿ ಕಡ್ಡಾಯವಾಗಿ ನವೀಕರಿಸುವುದು.

6. ಮುಂಗಡ:

a. ಸಾಮಾನ್ಯ ಭವಿಷ್ಯ ನಿಧಿ (GPF):

HRMS1 ನಲ್ಲಿ ಸಾಮಾನ್ಯ ಭವಿಷ್ಯ ನಿಧಿಯ (GPF) ಹಾಗೂ ಸಾಮಾನ್ಯ ಭವಿಷ್ಯ ನಿಧಿಯ ಮುಂಗಡ (GPF Advance) ಗಳ ಬಗ್ಗೆ ನಮೂದಾಗಿರುವ ಮಾಹಿತಿಯಲ್ಲಿ ಯಾವುದೇ ನಕಲು ಇರಬಾರದು.

b. ಹಬ್ಬದ ಮುಂಗಡ:

ಪ್ರಸ್ತುತ ಕಾರ್ಯನಿರ್ಹಿಸುತ್ತಿರು ಸರ್ಕಾರಿ ನೌಕರರ ಇವರೆವಿಗೂ ಪಡೆದಿರುವ ಹಬ್ಬದ ಮುಂಗಡದ ಪ್ರಾರಂಭಿಕ ದಿನಾಂಕ, ಮುಕ್ತಾಯದ ದಿನಾಂಕ, ಮುಕ್ತಾಯಗೊಳಿಸಲು ಸಾಧ್ಯವಾಗದ ಪ್ರಕರಣಗಳನ್ನು ನಿಖರವಾದ ಮಾಹಿತಿಯೊಂದಿಗೆ ಹೆಚ್. ಆರ್. ಎಂ. ಎಸ್ -1.0 ರಲ್ಲಿ ನವೀಕರಿಸುವುದು.

7. ಸಾಮೂಹಿಕ ವಿಮಾ ಯೋಜನೆ:

ಒಂದು ಸಮೂಹದಿಂದ ಇನ್ನೊಂದು ಸಮೂಹಕ್ಕೆ ಒಬ್ಬ ಸದಸ್ಯ ನಿಯತ ಬಡ್ತಿ ಅಥವಾ ನೇಮಕಾತಿ ಹೊಂದಿದ ಸಂದರ್ಭದಲ್ಲಿ, ಆತನ ಚಂದಾ ಹಣವನ್ನು “ಯೋಜನೆ” ಯ ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಿಂದ ಆತನು ಬಡ್ತಿ ಅಥವಾ ನೇಮಕಾತಿ ಹೊಂದಿದಂಥ ಸಮೂಹಕ್ಕೆ ತಕ್ಕದಾದ ಮಟ್ಟಕ್ಕೆ ಪರಿಷ್ಕರಿಸಿ ನಿಗಧಿಪಡಿಸತಕ್ಕದ್ದು. “ಯೋಜನೆ” ಯ ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದ ದಿನಾಂಕದವರೆಗೆ ಅಂತಹ ಬಡ್ತಿ ಅಥವಾ ನೇಮಕ ಹೊಂದುವುದಕ್ಕೆ ಮೊದಲು ಆತನು ಅರ್ಹನಾಗಿದ್ದ ಅದೇ ಮೊಬಲಗಿನ ವಿಮೆಗೆ ಒಳಪಟ್ಟು ಮುಂದುವರಿಯುತ್ತಾನೆ.

8. ಪರಿಕ್ಷಾರ್ಥಕ ಅವಧಿ:

ಸರ್ಕಾರಿ ಆದೇಶ ಸಂಖ್ಯೆ: ಆಇ 1 ಸೇನಿಸೇ 2019 ಬೆಂಗಳೂರು, ದಿನಾಂಕ: 11-01-1019 ರ ಆದೇಶದನ್ವಯ ದಿನಾಂಕ: 01-01-2019 ರಿಂದ ಜಾರಿಗೆ ಬರುವಂತೆ ಪರಿಕ್ಷಾರ್ಥಕ ಅವಧಿ ಮುಗಿದ ಮೇಲೆ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿಯನ್ನು ಸಂದ್ರರ್ಭಾನುಸಾರವಾರಿ ಪರಿ ವರ್‌ಷದ ಒಂದನೇ ಜನವರಿ ಅಥವಾ ಒಂದನೇ ಜುಲೈ ದಿನಾಂಕದಂದು ಮಂಜೂರು ಮಾಡಿ ನಿಯತಗೊಳಿಸಿ ಹೆಚ್. ಆರ್. ಎಂ. ಎಸ್ -1.0 ರಲ್ಲಿ ಕಡ್ಡಾಯವಾಗಿ ನವೀಕರಿಸುವುದು.

9. 7 ನೇ ವೇತನ ಆಯೋಗ:

ಆರ್ಥಿಕ ಇಲಾಖೆಯು ಹೊರಡಿಸಿರುವ 7 ನೇ ವೇತನ ಆಯೋಗದ ಆದೇಶಗಳನ್ವಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನಾನು ಹಚ್. ಆರ್. ಎಂ. ಎಸ್-1.0 ರಲ್ಲಿಯೇ ನಿಗಧಿಪಡಿಸವುದು ಹಾಗೂ ನಿಗಧಿಪಡಿಸಿದ ಪ್ರರಿಷ್ಕೃತ ವೇತನವು ಸರಿಯಿದೆಯೇ ಯೆಂದು ಕಚಿತಪಡಿಸಿಕೊಳ್ಳುವುದು, ಇಲ್ಲದಿದ್ದಲ್ಲಿ ತದನಂತರ ಹೆಚ್.ಆರ್.ಎಂ.ಎಸ್ 2.0 ನ ತಂತ್ರಾಂಶದಲ್ಲಿ ವೇತನ ಮಾಡ್ಯುಲ್ (Pay Roll Module) ನಿಂದ ನಿಮ್ಮ ಇಲಾಖೆಯ ಡಿ.ಡಿ.ಓ ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರರಿಷ್ಕೃತ ವೇತನ ಸೆಳೆಯಲು ಸಾಧ್ಯವಾಗುವುದಿಲ್ಲ.

10. ರಾಷ್ಟ್ರೀಯ ಪಿಂಚಣಿ ಯೋಜನೆ (NPS):

a. ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿರುವ ಸರ್ಕಾರಿ ನೌಕರರು PRAN ಸಂಖ್ಯೆಯನ್ನು ಹಚ್. ಆರ್. ಎಂ. ಎಸ್-1.0 ರಲ್ಲಿ ಕಡ್ಡಾಯವಾಗಿ ನಮೂದಿಸಬೇಕು/ ನವೀಕರಿಸಬೇಕು.

b. ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿರುವ ಸರ್ಕಾರಿ ನೌಕರರು ವಯೋನಿವ್ರತ್ತಿಹೊಂದುವ 6 ತಿಂಗಳ ಮುಂಚಿತವೇ ಮಾಸಿಕ ಪ್ರೀಮಿಯಂ ಮೊತ್ತವನ್ನು ನಿಲ್ಲಿಸಿರುವ ಬಗ್ಗೆ ಹೆಚ್. ಆರ್. ಎಂ. ಎಸ್ -1.0 ನಲ್ಲಿ ಕಡ್ಡಾಯವಾಗಿ ನವೀಕರಿಸುವುದು.

11. ಮನೆ ಬಾಡಿಗೆ ಭತ್ಯೆ (HRA) ಹಾಗೂ ವಸತಿಗೃಹ (Quarters):

ಸರ್ಕಾರಿ ನೌಕರರು ಬಾಡಿಗೆ ರಹಿತ ವಸತಿಗೃಹವನ್ನು (Rent free Quarters accomodation) ಉಪಯೋಗಿಸುತ್ತಿದ್ದಲ್ಲಿ, ಅಂತಹ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯಿಂದ ಹೊರಡಿಸಿರುವ “ಮನೆ ಬಾಡಿಗೆ ಭತ್ಯೆ (HRA) ಹಾಗೂ ವಸತಿಗೃಹದ (Quarters)” ಬಗ್ಗೆ ನವೀಕೃತ ಅದೇಶದನ್ವಯ ಮನೆ ಬಾಡಿಗೆ ಭತ್ಯೆ (HRA)ಯ ಬಗ್ಗೆ ಸರಿಯಾಗಿ ಲೆಕ್ಕಾಚ್ಚಾರ ಹಾಕಿದ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್-1.0 ನಲ್ಲಿ ಕಡ್ಡಾಯವಾಗಿ  ನವೀಕರಿಸುವುದು.

10. ಸಹಾಯವಾಣಿ: :

[https://hrms.karnataka.gov.in]
ಹೆಚ್. ಆರ್. ಎಂ. ಏಸ್ -2.0 ರ ತಂತ್ರಾಂಶವನ್ನು ಪ್ರಯೋಗಿಕವಾಗಿ ಸೆರ್ಪಡಿಸಲಾಗು/ ಸೆರ್ಪಡಿಸಲಾದ ಇಲಾಖೆಗಳು, ಮೇಲೆ ತಿಳಿಸಿರುವಂತೆ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ, ಸಹಾಯ ವಾಣಿಯಲ್ಲಿ ಸಂಬಂಧಿದಪಟ್ಟ ಸಮಸ್ಯೆಗಳಿಗೆ ಟಿಕೆಟ್‌ಗಳನ್ನು ಸಲ್ಲಿಸುವಾಗ ವೃಂದ, ಹುದ್ದೆ, ಪದನಾಮ, ಕಚೇರಿ ಹೆಸರು, ಡಿ.ಡಿ.ಒ ಕೋಡ್ ಅನ್ನು ನಮೂದಿಸುವುದು.

ಹೆಚ್.ಆ‌ರ್.ಎಂ.ಎಸ್ 2.0 ತಂತ್ರಾಂಶದಲ್ಲಿರುವ 36 ಮಾಡ್ಯುಲ್‌ಗಳು ಸಮಕ್ಷಮವಾಗಿ ಹೊಂದಿಕೊಂಡು ಯಶಸ್ವಿಯಾಗಿ ನಡೆಸಲು ನಿಮ್ಮ ಸಹಕಾರ ಅತ್ಯಂತ ಅವಶ್ಯಕವಾಗಿದ್ದು ಹಾಗೂ ಮೇಲೆ ಕೋರಿರುವ ಎಲ್ಲಾ ಪ್ರಕ್ರಿಯೆಗಳನ್ನು/ ಮಾಹಿತಿಯನ್ನು ಆದ್ಯತೆ ಮೆರೆಗೆ ಪೂರ್ಣಗೊಳಿಸಬೇಕೆಂದು ಹಾಗೂ ತಮ್ಮ ಅಧೀನ ಕಛೇರಿಗಳಿಗೆ ಮಾರ್ಗಸೂಚಿಯನ್ನು ನೀಡಲು ಕೋರಿದೆ. ಈ ಕುರಿತು ಮಾಹಿತಿ.

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “HRMS -2.0 SOFTWARE: ಹೆಚ್.ಆರ್.ಎಂ.ಎಸ್ -2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು ಇಲಾಖೆಗೆ/ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಅದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ.”

Leave a Comment

error: Content is protected !!