UDISE+ REPORT PUBLISHED-2023-24
UDISE+: ವಿದ್ಯಾರ್ಥಿಗಳ ದಾಖಲಾತಿ, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಪ್ರಮಾಣ, ಶಿಕ್ಷಕರ ಸಂಖ್ಯೆ, ಅಧಿಕೃತ- ಅನಧಿಕೃತ ಶಾಲೆಗಳು ಸೇರಿದಂತೆ ದೇಶದ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು UDISE+ ಬಹಿರಂಗಪಡಿಸಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023-24ರಲ್ಲಿ ವಿದ್ಯಾರ್ಥಿಗಳ ದಾಖಲಾತಿ ಒಟ್ಟು ಹೊಖಲಾದ ಒಂದು ಕೋಟಿಗೂ ಅಧಿಕ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ-ಅಂಶಗಳು ತಿಳಿಸಿವೆ.
2023-24ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 24.8 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಸಚಿವಾಲಯ ಬಿಡುಗಡೆ ಮಾಡಿದ ‘ಏಕೀಕೃತ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆ ಪ್ಲಸ್’ (UDISE+) ವರದಿ ತಿಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿನ ದಾಖಲಾತಿಯನ್ನು ಪರಿಶೀಲಿಸಿದರೆ ದಾಖಲಾತಿ ದತ್ತಾಂಶವು ಸುಮಾರು 26 ಕೋಟಿಗೆ ತಲುಪಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2021-22 ಸೇರಿದಂತೆ ಅದರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಬಿಡುಗಡೆಯಾಗಿರುವ ದಾಖಲಾತಿಗೆ ಸಂಬಂಧಿಸಿದ ಅಂಕಿ-ಅಂಶಗಳು ಸಂಪೂರ್ಣವಾಗಿ ಭಿನ್ನವಾಗಿವೆ ಶಿಕ್ಷಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
2018-19ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ 26.02 ಕೋಟಿಯಾಗಿದ್ದು, ಇದು 2019-20ರಲ್ಲಿ ಶೇ.1.6ರಷ್ಟು (42 ಲಕ್ಷಕ್ಕೂ ಹೆಚ್ಚು) ಹೆಚ್ಚಳವಾಗಿದೆ.
2020-21ಕ್ಕೆ ಹೋಲಿಸಿದರೆ 2021-22ರಲ್ಲಿ ಒಟ್ಟು ದಾಖಲಾತಿ ಪ್ರಮಾಣ ಶೇ. 0.76ರಷ್ಟು ಹೆಚ್ಚಾಗಿದೆ. 2022-23ರಲ್ಲಿ, 25.18 ಕೋಟಿ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವ ಮೂಲಕ ದಾಖಲಾತಿಯಲ್ಲಿ ಇಳಿಕೆ ಕಂಡುಬಂದಿದೆ. 2023-24ರಲ್ಲಿಯೂ 24.8 ಕೋಟಿ ದಾಖಲಾತಿ ಕಂಡು ಮತ್ತಷ್ಟು ಕುಸಿತ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಸ್ಥಿತಿಗತಿ ಇಲ್ಲಿದೆ.!
ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮತ್ತು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ 1,572 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇನ್ನು 7,821 ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದಾರೆ. ಈ ಏಕೋಪಾಧ್ಯಾಯ ಶಾಲೆಗಳಲ್ಲಿ 2,74,818 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 1,078 ಶಾಲೆಗಳಲ್ಲಿ ಕನಿಷ್ಠ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2024ರಲ್ಲಿ ರಾಜ್ಯದಲ್ಲಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಒಟ್ಟು 75,868 ಶಾಲೆಗಳಿದ್ದು, ಇದರಲ್ಲಿ 1,19,26,303 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು 2022-23ನೇ ಸಾಲಿನ ದಾಖಲಾತಿಗೆ ಹೋಲಿಸಿದರೆ, ಕುಂಠಿತವಾಗಿರುವುದು ಕಂಡು ಬಂದಿದೆ. ಈ ಅವಧಿಯಲ್ಲಿ 1,23,98,654 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2021-2200 1,20,92,381 5 2020-2100 1,18,56,736 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.
ಸರಕಾರಿ ಶಾಲೆ ಪ್ರವೇಶ:
ಇನ್ನು, ಪ್ರತ್ಯೇಕವಾಗಿ ಸರಕಾರಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಗಮನಿಸಿದಾಗ 3 ಲಕ್ಷ ವಿದ್ಯಾರ್ಥಿಗಳ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಸರಕಾರಿ ಶಾಲೆಗಳಲ್ಲಿ 2023-24ರ ಅವಧಿಯಲ್ಲಿ 49,85,661 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2022-23ರಲ್ಲಿ ಇದರ ಪ್ರಮಾಣ 53,27,221 ಇತ್ತು. ಅಂದರೆ ಈ ವರ್ಷ 3,41,560 ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ.
ಖಾಸಗಿ ಶಾಲೆಗಳ ಪ್ರವೇಶ: ಖಾಸಗಿ ಶಾಲೆಗಳಲ್ಲಿ 2023-2400 54,80,677 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 2022-23ರಲ್ಲಿ 55,59,281 ಪ್ರವೇಶ ಪಡೆದಿದ್ದರು. ಅಂದರೆ, ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 78,604ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಅಂಕಿ-ಅಂಶಗಳ ವಿವರ:
▪️ 19.7 ಕೋಟಿ : 2023-24ರ ಸಾಲಿನಲ್ಲಿ ಸ್ವಯಂಪ್ರೇರಣೆಯಿಂದ ಆಧಾರ್ ಸಂಖ್ಯೆಗಳನ್ನು ಒದಗಿಸಿದ ವಿದ್ಯಾರ್ಥಿಗಳು
▪️2018-19 ರಲ್ಲಿ 13.53 ಕೋಟಿ ಬಾಲಕರು ದಾಖಲಾಗಿದ್ದರೆ, 2023-24 ರಲ್ಲಿ 12.87 ಕೋಟಿಗೆ ಇಳಿಕೆಯಾಗಿದೆ. ಅಂದರೆ ಶೇ. 4.87 ರಷ್ಟು ಕುಸಿದಿದೆ.
▪️ಬಾಲಕಿಯರ ದಾಖಲಾತಿ 2018-19ರಲ್ಲಿ 12.49 ಕೋಟಿಯಷ್ಟಿದ್ದರೆ, 2023-24 ರಲ್ಲಿ 11.93 ಕೋಟಿಗೆ ಇಳಿದಿದೆ. ಅಂದರೆ ಶೇ.4.4ರಷ್ಟು ಇಳಿಕೆ ಕಂಡಿದೆ.
▪️ಬಿಹಾರ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ರಾಜ್ಯಗಳ ದಾಖಲಾತಿ ಅತಿ ಹೆಚ್ಚು ಇಳಿಕೆಯಾಗಿದೆ.
▪️ಉತ್ತರ ಪ್ರದೇಶದಲ್ಲಿ 2018-19ರಲ್ಲಿ 4.44 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದರೆ, 2023-24ರ ವೇಳೆಗೆ 4.16 ಕೋಟಿಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 2.32 ಕೋಟಿಯಿಂದ 2.13 ಕೋಟಿಗೆ, ಬಿಹಾರದಲ್ಲಿ 2.49 ಕೋಟಿಯಿಂದ 2.23 ಕೋಟಿಗೆ ಕುಸಿತ ಕಂಡಿದೆ.
ದೇಶದಲ್ಲಿವೆ 22 ಸಾವಿರ ಅನಧಿಕೃತ ಶಾಲೆಗಳು
ದೇಶದಲ್ಲಿರುವ ಅನಧಿಕೃತ ಶಾಲೆಗಳ ಬಗ್ಗೆಯೂ ವರದಿ ಗಮನಹರಿಸಿದೆ. ಭಾರತದಲ್ಲಿ ಒಟ್ಟು 22 ಸಾವಿರಕ್ಕೂ ಅಧಿಕ ಶಾಲೆಗಳಿದ್ದು, ಅನಧಿಕೃತ ಶಾಲೆಗಳ ವಿರುದ್ಧಕ್ರಮ ಜರುಗಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದೆ. ಅನಧಿಕೃತ ಶಾಲೆಗಳು ಸುಳ್ಳು ಯು-ಡೈಸ್ ಕೋಡ್ ಬಳಕೆ ಮಾಡಿ ಶಾಲೆಗಳನ್ನು ನಡೆಸುತ್ತಿದ್ದು, ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗಿದೆ. ದೇಶದಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಜಾರಿಗೆ ಬಂದು ಒಂದೂವರೆ ದಶಕ ಕಳೆದರೂ 22,298 ಶಾಲೆಗಳು ಮಾನ್ಯತೆ ಪಡೆಯದೆ ಅನಧಿ ಕೃತವಾಗಿ ನಡೆಯುತ್ತಿವೆ. ಇಂತಹ ಶಾಲೆಗಳಲ್ಲಿ 24.34 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕೇವಲ 2 ಅನಧಿಕೃತ ಶಾಲೆಗಳಿದ್ದು, ಇದರಲ್ಲಿ 34 ವಿದ್ಯಾರ್ಥಿಗಳು ಹಾಗೂ 8 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದಾಖಲಾತಿ ಕುಸಿತಕ್ಕೆ ಕಾರಣಗಳು ಇಲ್ಲಿವೆ.
‘ಶಾಲಾ ದಾಖಲಾತಿ ಕುಸಿಯಲು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಾರಣವಲ್ಲ, ಬದಲಿಗೆ ಹೊಸ ವರದಿಗಳಿಗೆ ಡೇಟಾ ಸಂಗ್ರಹಿಸುವ ವಿಧಾನದಲ್ಲಿನ ಲೋಪ’ ಎಂದು ಶಿಕ್ಷಣ ಸಚಿವಾಲಯ ಸಮರ್ಥಿಸಿಕೊಂಡಿದೆ. ಕಳೆದ ವರ್ಷ ಶಾಲೆಗಳ ಮೂಲಕ ಡೇಟಾವನ್ನು ಸಂಗ್ರಹಿಸಲಾಗಿತ್ತು. ಪ್ರತಿ ಶಾಲೆಯಲ್ಲಿ ಎಷ್ಟು ಮಕ್ಕಳಿದ್ದಾರೆ, ಪ್ರತಿ ತರಗತಿಯಲ್ಲಿರುವ ವಿದ್ಯಾರ್ಥಿನಿಯರೆಷ್ಟು ವಿದ್ಯಾರ್ಥಿಗಳೆಷ್ಟು? ಎಂಬುದರ ಮಾಹಿತಿಯನ್ನು ಶಾಲೆಗಳೇ ನೀಡಬೇಕಿತ್ತು. ಆದರೆ, 2022-23ನೇ ಸಾಲಿನಿಂದ ವಿದ್ಯಾರ್ಥಿವಾರು ಡೇಟಾ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. ಅಂದರೆ, ವಿದ್ಯಾರ್ಥಿಯ ಹೆಸರು, ವಿಳಾಸ, ಪೋಷಕರ ಹೆಸರು, ಆಧಾರ್ ಮಾಹಿತಿ ಇವುಗಳನ್ನು ಯುಡಿಐಎಸ್‌ಇ ಪ್ಲಸ್‌ನಲ್ಲಿ ಕೇಳಲಾಗಿತ್ತು. ಡೇಟಾ ಸಂಗ್ರಹದ ಮಾದರಿ ಬದಲಾಯಿಸಿದ್ದರಿಂದ ದಾಖಲಾತಿ ಕುಸಿತವಾದಂತೆ ತೋರುತ್ತಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಹೊಸ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಯಿಂದಲೂ 60 ರೀತಿಯ ಮಾಹಿತಿಗಳನ್ನು ಅಂದರೆ, ಪೋಷಕರ ಹೆಸರು, ವಿಳಾಸ, ಆಧಾರ್, ಎತ್ತರ ಮತ್ತು ತೂಕ, ವಿದ್ಯಾರ್ಥಿಯ ಫಲಿತಾಂಶ ಹಾಗೂ ವಾರ್ಷಿಕ ಹಾಜರಾತಿ ಸೇರಿ ವಿವಿಧ ಮಾಹಿತಿಗಳನ್ನು ಕೋರಲಾಗಿತ್ತು.
ಏನಿದು ಯು -ಡೈಸ್ ಪ್ಲಸ್? ಮಾಹಿತಿ ಇಲ್ಲಿದೆ.
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ತರಲು ಕೇಂದ್ರ ಸರಕಾರ ರಚಿಸಿರುವ ವೇದಿಕೆಯೇ ಯು-ಡೈಸ್ ಪ್ಲಸ್. ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಡಿ ಬರುವ ಇದು ಬೃಹತ್ ನಿರ್ವಹಣಾ ಮಾಹಿತಿ ವ್ಯವಸ್ಥೆ ಯಾಗಿದೆ.
2012ರಲ್ಲಿ ಆರಂಭವಾಗಿರುವ ಯು-ಡೈಸ್ ಪ್ಲಸ್ 2025 ಕ್ರಮೇಣ ಶಾಲೆ, ಪೋಷಕರು ಮತ್ತು ಅಧಿಕಾರಿಗಳಿಗೆ ಅಗತ್ಯ ಶೈಕ್ಷಣಿಕ ಡೇಟಾ ಪಡೆಯುವ ವೇದಿಕೆಯಾಗಿ ಗುರುತಿಸಿಕೊಂಡಿದೆ.
ಶೈಕ್ಷಣಿಕ ಕ್ಷೇತ್ರದ ಹೊಸ ಬೆಳವಣಿಗೆಗಳ ಕುರಿತು ಸರಕಾರಕ್ಕೆ ಮಾಹಿತಿ ಒದಗಿಸುವ ಈ ವೇದಿಕೆಯು ಈ ಮೂಲಕ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪಾರದರ್ಶಕ ಮತ್ತು ಸರಳ ವನ್ನಾಗಿಸುತ್ತದೆ. ಸರಕಾರದ ಪರಿಣಾಮಕಾರಿ ಶೈಕ್ಷಣಿಕ ಯೋಜನೆ ಮತ್ತು ನಿರ್ಧಾರದ ಮೇಲೆ ಪ್ರಭಾವ ಬೀರುವ ಈ ವೇದಿಕೆಯ ವರದಿಗಳು ಸಕಾಲಿಕ ಮತ್ತು ನಿಖರ ಡೇಟಾಗಳಿಂದ ರೂಪುಗೊಂಡಿವೆ. ಈ ಮಾಹಿತಿ ವ್ಯವಸ್ಥೆಯಲ್ಲಿ 14.72 ಲಕ್ಷಕ್ಕೂ ಹೆಚ್ಚು ಶಾಲೆಗಳು, 98.08 ಲಕ್ಷ ಶಿಕ್ಷಕರು ಮತ್ತು 24.80 ಕೋಟಿ ಮಕ್ಕಳಿದ್ದಾರೆ.